staff@baldwingirlspucollege.edu.in

ಪ್ರೊ . ಕಲಾರಂಜಿನಿ ಬಿ.ಯು

ಕನ್ನಡ ಅಧ್ಯಾಪಕರು

ದ್ಯೇಯ
ಭಾಷಾ ಬೋಧನೆ ಎಂಬುದು ಸಾಮಾಜಿಕ ಸಾಂಸ್ಕೃತಿಕ ಹಾಗೂ ಜೀವನ ಮೌಲ್ಯಗಳ ಬೋಧನೆಯೇ ಆಗಿರುತ್ತದೆ. ಭಾಷಾ ಬೋಧನೆಯ ಅವಕಾಶ ದೊರೆತಿದೆ ಎಂದರೆ ಸಮಾಜ ನಿರ್ಮಾಣದ ಕಾರ್ಯ ದೊರೆತಿದೆ ಎಂದೇ ಅರ್ಥ. ಉತ್ತಮ ಸಮಾಜ ನಿರ್ಮಾಣ ಭಾಷಾ ಬೋಧಕನ ಸಂಕಲ್ಪ ವಾಗಿರಬೇಕು.

ಪರಿಚಯ

ಪ್ರೊ. ಕಲಾರಂಜಿನಿ ಅವರು ಪ್ರಾರಂಭದಿAದಲೂ ಕನ್ನಡ ಭಾಷಾಭಿಮಾನಿ. ಭಾಷೆಯಿಂದಲೇ ಮಾನವನ ಬದುಕಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ನಂಬಿದವರು. ಕನ್ನಡ ಭಾಷೆಯ ಹುಟ್ಟು ಬೆಳವಣಿಗೆ, ಸಾಹಿತ್ಯ, ವ್ಯಾಕರಣ, ಜನಪದಗಳ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಕನ್ನಡ ಭಾಷೆಯೊಂದಿಗೆ ಸಾಹಿತ್ಯ, ಸಮಾಜ, ಸಂಸ್ಕೃತಿಯನ್ನು ಅರಿತವರಾಗಿದ್ದಾರೆ. ಯುವ ಜನತೆಯ ಶೈಕ್ಷಣಿಕ ಬೆಳವಣಿಗೆಯೊಳಗೆ ಅವರ ಭವಿಷ್ಯದ ಬದುಕನ್ನು ಕಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಯಾವುದೇ ವಿಷಯದ ಜ್ಞಾನವನ್ನು ಹೊಂದಲು ಭಾಷೆಯ ಅಗತ್ಯವಿದೆ. ಭಾಷೆಯಿಂದಲೇ ವೈಜ್ಞಾನಿಕ ಆವಿಷ್ಕಾರಗಳು, ವೈಚಾರಿಕ ಮನೋಭಾವಗಳು, ಅನುಭವದ ನಿರ್ಣಯಗಳು ರೂಪಗೊಳ್ಳುತ್ತವೆ. ಆದ್ದರಿಂದ ಭಾಷಿಕ ಬೆಳವಣಿಗೆ ಮಾನವನ ಬೆಳವಣಿಗೆಯೇ ಆಗಿದೆ.

ಶೈಕ್ಷಣಿಕ ಅರ್ಹತೆ

  • ಕನ್ನಡದಲ್ಲಿ ಎಂ.ಎ., ಬಿ.ಎಡ್
  • ಪಿಹೆಚ್.ಡಿ ಸಂಶೋಧನ ಅಧ್ಯಯನದ ಯೋಜನೆಯಲ್ಲಿ ನಿರತರಾಗಿದ್ದಾರೆ

ಬೋಧನಾನುಭವ

  • ಸುಮಾರು ೧೨ ವರ್ಷಗಳ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಬೋಧನಾನುಭವವನ್ನು ಹೊಂದಿದ್ದಾರೆ.

ಪ್ರಕಟಣೆ

  • “ಯತ್ರ ನಾರ್ಯಸ್ತು” ಪದ್ಯ ಮಿಂಚುಳ್ಳಿ ಮಾಸಿಕದಲ್ಲಿ (ಜುಲೈ ೨೦೨೪) ಪ್ರಕಟ.
  • “ಊರ್ಮಿಳಾ” ಪದ್ಯ ಮಿಂಚುಳ್ಳಿ ಮಾಸಿಕದಲ್ಲಿ (ನವಂಬರ್ ೨೦೨೪) ಪ್ರಕಟ.
  • “ಭಾಷೆ ಸಾಮಾಜಿಕ ಸಂಬAಧಗಳು” ಎಂಬ ಪ್ರಬಂಧ, ಬೆಂಗಳೂರಿನ ಎಂಎಲ್‌ಎ ಅಕಾಡೆಮಿ ಆಫ್ ಹೈಯರ್ ಲರ್ನಿಂಗ್ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಿದ್ದು "ಭಾಷೆ ಮತ್ತು ಅಸ್ತಿತ್ವ" ಕೃತಿಯಲ್ಲಿ ಪ್ರಕಟವಾಗಿದೆ. ೨೦೨೪
  • ಸಾಮಾಜಿಕ ಲಿಂಗ ಅಸಮಾನತೆಯನ್ನು (Gender Discrimination) ಗಂಭೀರವಾಗಿಯೇ ವಿರೋಧಿಸುವ ಇವರು ತಮ್ಮ ಕಾವ್ಯಗಳ ಮೂಲಕ ಮಹಿಳಾವಾದ (Feminism) ವನ್ನು ಮಂಡಿಸುತ್ತಾ ಬಂದಿದ್ದಾರೆ.