ದ್ಯೇಯ
ಭಾಷಾ ಬೋಧನೆ ಎಂಬುದು ಸಾಮಾಜಿಕ ಸಾಂಸ್ಕೃತಿಕ ಹಾಗೂ ಜೀವನ ಮೌಲ್ಯಗಳ ಬೋಧನೆಯೇ ಆಗಿರುತ್ತದೆ. ಭಾಷಾ ಬೋಧನೆಯ ಅವಕಾಶ ದೊರೆತಿದೆ ಎಂದರೆ ಸಮಾಜ ನಿರ್ಮಾಣದ ಕಾರ್ಯ ದೊರೆತಿದೆ ಎಂದೇ ಅರ್ಥ. ಉತ್ತಮ ಸಮಾಜ ನಿರ್ಮಾಣ ಭಾಷಾ ಬೋಧಕನ ಸಂಕಲ್ಪ ವಾಗಿರಬೇಕು.
ಪ್ರೊ. ಕಲಾರಂಜಿನಿ ಅವರು ಪ್ರಾರಂಭದಿAದಲೂ ಕನ್ನಡ ಭಾಷಾಭಿಮಾನಿ. ಭಾಷೆಯಿಂದಲೇ ಮಾನವನ ಬದುಕಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ನಂಬಿದವರು. ಕನ್ನಡ ಭಾಷೆಯ ಹುಟ್ಟು ಬೆಳವಣಿಗೆ, ಸಾಹಿತ್ಯ, ವ್ಯಾಕರಣ, ಜನಪದಗಳ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಕನ್ನಡ ಭಾಷೆಯೊಂದಿಗೆ ಸಾಹಿತ್ಯ, ಸಮಾಜ, ಸಂಸ್ಕೃತಿಯನ್ನು ಅರಿತವರಾಗಿದ್ದಾರೆ. ಯುವ ಜನತೆಯ ಶೈಕ್ಷಣಿಕ ಬೆಳವಣಿಗೆಯೊಳಗೆ ಅವರ ಭವಿಷ್ಯದ ಬದುಕನ್ನು ಕಟ್ಟುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಯಾವುದೇ ವಿಷಯದ ಜ್ಞಾನವನ್ನು ಹೊಂದಲು ಭಾಷೆಯ ಅಗತ್ಯವಿದೆ. ಭಾಷೆಯಿಂದಲೇ ವೈಜ್ಞಾನಿಕ ಆವಿಷ್ಕಾರಗಳು, ವೈಚಾರಿಕ ಮನೋಭಾವಗಳು, ಅನುಭವದ ನಿರ್ಣಯಗಳು ರೂಪಗೊಳ್ಳುತ್ತವೆ. ಆದ್ದರಿಂದ ಭಾಷಿಕ ಬೆಳವಣಿಗೆ ಮಾನವನ ಬೆಳವಣಿಗೆಯೇ ಆಗಿದೆ.